ಧನದರ್ಶಿ
ಚಿಟ್ಸ್ ಪ್ರೈವೇಟ್ ಲಿಮಿಟೆಡ್
ಧನದರ್ಶಿ
ಚಿಟ್ಸ್ ಪ್ರೈವೇಟ್ ಲಿಮಿಟೆಡ್

ಪ್ರಥಮ ದರ್ಜೆ ಚಿಟ್ ಫಂಡ್‌ಗಾಗಿ ಹುಡುಕುತ್ತಿರುವಿರಾ?

ನಮ್ಮ ಬಗ್ಗೆ

ಧನದರ್ಶಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ 2006ನೇ ವರ್ಷದಲ್ಲಿ ಸ್ಥಾಪನೆಯಾಗಿದ್ದು, ವಾರ್ಷಿಕ ವಹಿವಾಟು ಐದು ಕೋಟಿ ರೂಗಳಿಗೆ ಮೀರಿದ್ದು ಇದುವರೆ ರೂ. 25,000, 30,000, 50,000, 1,00,000, 150,000, 2,00,000, 6,00,000, 9,00,000, 10,00,000, 12,00,000  ಹಾಗೂ 25,00,000 ರೂ ಗಳ ಒಳಗಿನ ವಿವಿಧ ಮೌಲ್ಯದ ಚಿಟ್ಸ್ ಗ್ರೂಪ್‌ಗಳನ್ನು ಕಂಪನಿಯು ನಡೆಸುತ್ತಿದ್ದು, ಮುಂದುವರೆದು ಹೆಚ್ಚಿನ ಮೊತ್ತದ ಗ್ರೂಪ್‌ಗಳನ್ನು ಮಾಡುವ ಸದುದ್ದೇಶವನ್ನು ಹೊಂದಿದ್ದು, ಸುಮಾರು ಐದು ಕೋಟಿ ಗಳನ್ನು ಮೀರಿದ ವ್ಯವಹಾರವನ್ನು ಮಾಡಿರುತ್ತವೆ. ಇಲ್ಲಿಯವರೆಗೂ ಎಲ್ಲಾ ಸದಸ್ಯರುಗಳಿಗೆ ಅವರ ಹಣವನ್ನು ಸಕಾಲದಲ್ಲಿ ಹಿಂದಿರುಗಿಸಲಾಗಿದೆ.

ನಮ್ಮ ಸೇವೆಗಳು

ಚಂದಾದಾರರಾಗುವುದು

ನೀವು ಡಿ.ಸಿ.ಪಿ.ಎಲ್. ಚಿಟ್ಸ್ ನಲ್ಲಿ ಚಂದಾದಾರರಾಗಲು ನಮ್ಮ ಕಛೇರಿಗೆ ವೈಯಕ್ತಿಕವಾಗಿ ಭೇಟಿ ನೀಡುವ ಮೂಲಕವಾಗಿಲಿ ಅಥವಾ ಡಿ.ಸಿ.ಪಿ.ಎಲ್.ನ ಪ್ರತಿನಿಧಿ/ಸಲಹೆಗಾರರ ಮೂಲಕವಾಗಲೀ ಚಂದಾದಾರರಾಗಬಹುದು. ಚಂದಾದಾರರಾಗುವ ಸಮಯದಲ್ಲಿ “ನಿಮ್ಮ ಗ್ರಾಹಕನ್ನು ತಿಳಿದುಕೊಳ್ಳಿ” (ಕೆವೈಸಿ)ಯ ನಿಯಮಗಳನ್ನು ನಾವು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತೇವೆ. ಮತ್ತು ಚಂದಾದಾರಾಗುವ ಸಮಯದಲ್ಲಿ ಪಾಸ್‍ಪೋರ್ಟ್ ಅಳತೆಯ ಒಂದು ಭಾವಚಿತ್ರವನ್ನು ವಿಳಾಸದ/ ಗುರುತಿನ ಚೀಟಿಯ ಪುರಾವೆ, ಪ್ಯಾನ್ ಕಾರ್ಡ್, ಆದಾಯ ಪುರಾವೆಗಳನ್ನು ತರಲು ಕೋರಲಾಗಿದೆ.

ಚಿಟ್ ಗುಂಪು

ಚಿಟ್ ಹಣಕಾಸು ವ್ಯವಹಾರವಾಗಿದ್ದು, ಅದು ಬಂಡವಾಳ ಹೂಡಿಕೆ ಮತ್ತು ಹಣ ಪಡೆಯುವ ಎರಡು ಅನುಕೂಲತೆಗಳನ್ನು ಒದಗಿಸುತ್ತದೆ. ಚಿಟ್ ಗುಂಪನ್ನು ವಿವಿಧ ನಿರ್ದಿಷ್ಟ ಅವಧಿಗೆ (ತಿಂಗಳುಗಳು) ಸಾರ್ವಜನಿಕರ ಬೇಡಿಕೆಗೆ ಅನುಸಾರವಾಗಿ ಕಾಲಕಾಲಕ್ಕೆ ಪ್ರಾರಂಭಿಸಲಾಗುವುದು.

ಹರಾಜು

ಸಂಬಂಧಪಟ್ಟ ಕಛೇರಿಯಲ್ಲಿ ಪ್ರತಿ ತಿಂಗಳು ನಿಗದಿಪಡಿಸಿರುವ ದಿನಾಂಕ ಮತ್ತು ಸಮಯದಂದು ಹರಾಜುಗಳನ್ನು ನಡೆಸಲಾಗುವುದು. ಪ್ರತಿ ತಿಂಗಳ ಎಲ್ಲಾ ಭಾನುವಾರಗಳು/ ಸಾರ್ವಜನಿಕ ರಜಾ ದಿನಗಳು ಅಥವಾ ಅನಿರೀಕ್ಷಿತ ರಜಾದಿನಗಳು ಬಂದ ಸಂದರ್ಭವನ್ನು ಹೊರತುಪಡಿಸಿ ಉಳಿದಂತೆ ದಿನಾಂಕ ಹಾಗೂ ಸಮಯವು ಚಿಟ್ ಮುಕ್ತಾಯದವರೆಗೆ ಅದೇ ಆಗಿರುತ್ತದೆ. ಚೀಟಿ ದಿನ ರಜಾ ದಿನವಾಗಿದ್ದರೆ ಅಂಥ ಸಂದರ್ಭದಲ್ಲಿ ಮುಂದಿನ ಕೆಲಸದ ದಿನದಂದು ಹರಾಜುಗಳನ್ನು ನಡೆಸಲಾಗುವುದು. ಇದರ ಸಂಬಂಧ ಹರಾಜಿನ ದಿನಾಂಕ ಹಾಗೂ ಸಮಯವನ್ನು ತಿಳಿಸಲಾಗುವುದು. ಬಿಡ್ಡಿಂಗ್ ಚಿಟ್ ಮೌಲ್ಯದ ಶೇ 5 ರಿಂದ ( ಫೋರ್‍ಮನ್ ಕಮಿಷನ್) ಪ್ರಾರಂಭವಾಗಲಿದ್ದು ಗರಿಷ್ಠ ಬಿಡ್ ಶೇ 40% ಆಗಿದೆ. ಒಂದು ವೇಳೆ ಒಬ್ಬರಿಗಿಂತ ಹೆಚ್ಚು ಚಂದಾದಾರರು ಶೇ40%ರಷ್ಟನ್ನು ಚಿಟ್ ತೆಗೆದುಕೊಳ್ಳಲು ಆಸಕ್ತಿ ತೋರಿದರೆ, ಯಶಸ್ವಿ ಬಿಡ್ಡುದಾರರನ್ನು ಲಕ್ಕಿ ಡ್ರಾ ಮೂಲಕ ನಿರ್ಧರಿಸಲಾಗುವುದು. ಯಶಸ್ವಿ ಬಿಡ್ಡುದಾರ ಬಹುಮಾನದ ಹಣವನ್ನು ಪಡೆಯಲು ಅರ್ಹವಾಗಿರುತ್ತಾನೆ. ಬಿಡ್ಡಿಂಗ್ ಮೊತ್ತವು ಫೋರ್‍ಮನ್ ಕಮಿಷನ್ ಶೇ 5 ರಷ್ಟನ್ನು ಹಾಗೂ ಜಿ ಎಸ್ ಟಿ ಕಡಿತವನ್ನು ಕೂಡ ಒಳಗೊಂಡಿರುತ್ತದೆ.

ಬಿಡ್ಡಿಂಗ್‍ನಲ್ಲಿ ಭಾಗವಹಿಸುವುದು ಹೇಗೆ?

ಯಾರು ಮಾಸಿಕ ಕಂತುಗಳನ್ನು ಯಾವುದೇ ಬಾಕಿಯಿಲ್ಲದೆ ಇಂದಿನವರೆಗೆ ಸಂದಾಯ ಮಾಡಿರುತ್ತಾರೋ ಆ ಚಂದಾದಾರರಿಗೆ ಮಾತ್ರವೇ ಬಿಡ್‍ನಲ್ಲಿ ಭಾಗವಹಿಸಲು ಅನುಮತಿ ನೀಡಲಾಗುತ್ತದೆ. ಬಿಡ್ಡಿಂಗನ್ನು ಖುದ್ದಾಗಿಯಾಗಲೀ ಅಥವಾ ಅಧಿಕೃತಗೊಳಿಸಿದ ವ್ಯಕ್ತಿಯ ಮೂಲಕವಾಗಲೀ ಅಥವಾ ಫೊರ್‍ಮನ್‍ಗೆ ಪ್ರತಿನಿಧಿ ಪತ್ರ ನೀಡುವ ಮೂಲಕವಾಗಿ ಆಗಲೀ ಮಾಡಬಹುದಾಗಿದೆ. ಚೆಕ್ ಮೂಲಕ ಸಂದಾಯ ಮಾಡಿದ ಸಂದರ್ಭದಲ್ಲಿ ಹರಾಜು ಸಮಯಕ್ಕಿಂತ ಮುಂಚೆ ಚೆಕ್ ನಗದೀಕರಣ ಆಗಿದ್ದರೆ ಮಾತ್ರ ಚಂದಾದಾರರನ್ನು ಬಿಡ್ಡಿಂಗ್ ಮಾಡಲು ಅನುಮತಿ ನೀಡಲಾಗುತ್ತದೆ. ಆದ್ದರಿಂದ ಚೆಕ್ಮೂಲಕ ಸಂದಾಯ ಮಾಡುವ ಚಂದಾದಾರರಿಗೆ ಗೊಂದಲವನ್ನು ತಪ್ಪಿಸಲು ಹರಾಜು ದಿನಾಂಕಕ್ಕಿಂತ 3 ದಿನ ಮುಂಚಿತವಾಗಿ ಸಂದಾಯ ಮಾಡಲು ಸೂಚಿಸಲಾಗಿದೆ.

ಸರಿಯಾದ ಸಮಯದಲ್ಲಿ,
ಸರಿಯಾದ ಕೆಲಸವನ್ನು ಮಾಡುವುದು.

0

Satisfied customers