ಸೇವೆಗಳು

ಚಂದಾದಾರರಾಗುವುದು

ನೀವು ಡಿ.ಸಿ.ಪಿ.ಎಲ್. ಚಿಟ್ಸ್ ನಲ್ಲಿ ಚಂದಾದಾರರಾಗಲು ನಮ್ಮ ಕಛೇರಿಗೆ ವೈಯಕ್ತಿಕವಾಗಿ ಭೇಟಿ ನೀಡುವ ಮೂಲಕವಾಗಿಲಿ ಅಥವಾ ಡಿ.ಸಿ.ಪಿ.ಎಲ್.ನ ಪ್ರತಿನಿಧಿ/ಸಲಹೆಗಾರರ ಮೂಲಕವಾಗಲೀ ಚಂದಾದಾರರಾಗಬಹುದು. ಚಂದಾದಾರರಾಗುವ ಸಮಯದಲ್ಲಿ “ನಿಮ್ಮ ಗ್ರಾಹಕನ್ನು ತಿಳಿದುಕೊಳ್ಳಿ” (ಕೆವೈಸಿ)ಯ ನಿಯಮಗಳನ್ನು ನಾವು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತೇವೆ. ಮತ್ತು ಚಂದಾದಾರಾಗುವ ಸಮಯದಲ್ಲಿ ಪಾಸ್‍ಪೋರ್ಟ್ ಅಳತೆಯ ಒಂದು ಭಾವಚಿತ್ರವನ್ನು ವಿಳಾಸದ/ ಗುರುತಿನ ಚೀಟಿಯ ಪುರಾವೆ, ಪ್ಯಾನ್ ಕಾರ್ಡ್, ಆದಾಯ ಪುರಾವೆಗಳನ್ನು ತರಲು ಕೋರಲಾಗಿದೆ.

ಚಿಟ್ ಗುಂಪು

ಚಿಟ್ ಹಣಕಾಸು ವ್ಯವಹಾರವಾಗಿದ್ದು, ಅದು ಬಂಡವಾಳ ಹೂಡಿಕೆ ಮತ್ತು ಹಣ ಪಡೆಯುವ ಎರಡು ಅನುಕೂಲತೆಗಳನ್ನು ಒದಗಿಸುತ್ತದೆ. ಚಿಟ್ ಗುಂಪನ್ನು ವಿವಿಧ ನಿರ್ದಿಷ್ಟ ಅವಧಿಗೆ (ತಿಂಗಳುಗಳು) ಸಾರ್ವಜನಿಕರ ಬೇಡಿಕೆಗೆ ಅನುಸಾರವಾಗಿ ಕಾಲಕಾಲಕ್ಕೆ ಪ್ರಾರಂಭಿಸಲಾಗುವುದು.

ಹರಾಜು

ಸಂಬಂಧಪಟ್ಟ ಕಛೇರಿಯಲ್ಲಿ ಪ್ರತಿ ತಿಂಗಳು ನಿಗದಿಪಡಿಸಿರುವ ದಿನಾಂಕ ಮತ್ತು ಸಮಯದಂದು ಹರಾಜುಗಳನ್ನು ನಡೆಸಲಾಗುವುದು. ಪ್ರತಿ ತಿಂಗಳ ಎಲ್ಲಾ ಭಾನುವಾರಗಳು/ ಸಾರ್ವಜನಿಕ ರಜಾ ದಿನಗಳು ಅಥವಾ ಅನಿರೀಕ್ಷಿತ ರಜಾದಿನಗಳು ಬಂದ ಸಂದರ್ಭವನ್ನು ಹೊರತುಪಡಿಸಿ ಉಳಿದಂತೆ ದಿನಾಂಕ ಹಾಗೂ ಸಮಯವು ಚಿಟ್ ಮುಕ್ತಾಯದವರೆಗೆ ಅದೇ ಆಗಿರುತ್ತದೆ. ಚೀಟಿ ದಿನ ರಜಾ ದಿನವಾಗಿದ್ದರೆ ಅಂಥ ಸಂದರ್ಭದಲ್ಲಿ ಮುಂದಿನ ಕೆಲಸದ ದಿನದಂದು ಹರಾಜುಗಳನ್ನು ನಡೆಸಲಾಗುವುದು. ಇದರ ಸಂಬಂಧ ಹರಾಜಿನ ದಿನಾಂಕ ಹಾಗೂ ಸಮಯವನ್ನು ತಿಳಿಸಲಾಗುವುದು. ಬಿಡ್ಡಿಂಗ್ ಚಿಟ್ ಮೌಲ್ಯದ ಶೇ 5 ರಿಂದ ( ಫೋರ್‍ಮನ್ ಕಮಿಷನ್) ಪ್ರಾರಂಭವಾಗಲಿದ್ದು ಗರಿಷ್ಠ ಬಿಡ್ ಶೇ 40% ಆಗಿದೆ. ಒಂದು ವೇಳೆ ಒಬ್ಬರಿಗಿಂತ ಹೆಚ್ಚು ಚಂದಾದಾರರು ಶೇ40%ರಷ್ಟನ್ನು ಚಿಟ್ ತೆಗೆದುಕೊಳ್ಳಲು ಆಸಕ್ತಿ ತೋರಿದರೆ, ಯಶಸ್ವಿ ಬಿಡ್ಡುದಾರರನ್ನು ಲಕ್ಕಿ ಡ್ರಾ ಮೂಲಕ ನಿರ್ಧರಿಸಲಾಗುವುದು. ಯಶಸ್ವಿ ಬಿಡ್ಡುದಾರ ಬಹುಮಾನದ ಹಣವನ್ನು ಪಡೆಯಲು ಅರ್ಹವಾಗಿರುತ್ತಾನೆ. ಬಿಡ್ಡಿಂಗ್ ಮೊತ್ತವು ಫೋರ್‍ಮನ್ ಕಮಿಷನ್ ಶೇ 5 ರಷ್ಟನ್ನು ಹಾಗೂ ಜಿ ಎಸ್ ಟಿ ಕಡಿತವನ್ನು ಕೂಡ ಒಳಗೊಂಡಿರುತ್ತದೆ.

ಬಿಡ್ಡಿಂಗ್‍ನಲ್ಲಿ ಭಾಗವಹಿಸುವುದು ಹೇಗೆ?

ಯಾರು ಮಾಸಿಕ ಕಂತುಗಳನ್ನು ಯಾವುದೇ ಬಾಕಿಯಿಲ್ಲದೆ ಇಂದಿನವರೆಗೆ ಸಂದಾಯ ಮಾಡಿರುತ್ತಾರೋ ಆ ಚಂದಾದಾರರಿಗೆ ಮಾತ್ರವೇ ಬಿಡ್‍ನಲ್ಲಿ ಭಾಗವಹಿಸಲು ಅನುಮತಿ ನೀಡಲಾಗುತ್ತದೆ. ಬಿಡ್ಡಿಂಗನ್ನು ಖುದ್ದಾಗಿಯಾಗಲೀ ಅಥವಾ ಅಧಿಕೃತಗೊಳಿಸಿದ ವ್ಯಕ್ತಿಯ ಮೂಲಕವಾಗಲೀ ಅಥವಾ ಫೊರ್‍ಮನ್‍ಗೆ ಪ್ರತಿನಿಧಿ ಪತ್ರ ನೀಡುವ ಮೂಲಕವಾಗಿ ಆಗಲೀ ಮಾಡಬಹುದಾಗಿದೆ. ಚೆಕ್ ಮೂಲಕ ಸಂದಾಯ ಮಾಡಿದ ಸಂದರ್ಭದಲ್ಲಿ ಹರಾಜು ಸಮಯಕ್ಕಿಂತ ಮುಂಚೆ ಚೆಕ್ ನಗದೀಕರಣ ಆಗಿದ್ದರೆ ಮಾತ್ರ ಚಂದಾದಾರರನ್ನು ಬಿಡ್ಡಿಂಗ್ ಮಾಡಲು ಅನುಮತಿ ನೀಡಲಾಗುತ್ತದೆ. ಆದ್ದರಿಂದ ಚೆಕ್ಮೂಲಕ ಸಂದಾಯ ಮಾಡುವ ಚಂದಾದಾರರಿಗೆ ಗೊಂದಲವನ್ನು ತಪ್ಪಿಸಲು ಹರಾಜು ದಿನಾಂಕಕ್ಕಿಂತ 3 ದಿನ ಮುಂಚಿತವಾಗಿ ಸಂದಾಯ ಮಾಡಲು ಸೂಚಿಸಲಾಗಿದೆ.

ಲಾಭಾಂಶ

ಪ್ರತಿಯೊಂದು ಹರಾಜಿನಲ್ಲಿ ಬಿಡ್ಡಿಂಗ್ ಮೊತ್ತದಲ್ಲಿ ಫೋರ್‍ಮನ್ ಕಮಿಷನ್ (ಚಿಟ್ ಮೌಲ್ಯದ ಶೇ 5ರಷ್ಟು) ಹಾಗೂ GST ಕಡಿತಗೊಳಿಸಿ ಉಳಿದ ಹಣವನ್ನು ಲಾಭಾಂಶವನ್ನಾಗಿ ಎಲ್ಲಾ ಚಂದಾದಾರರಿಗೆ ಸಮನಾಗಿ ಹಂಚಲಾಗುವುದು. ಚಂದಾದಾರರು, ಸಂಬಂಧಪಟ್ಟ ತಿಂಗಳ ಲಾಭಾಂಶವನ್ನು ಕಳೆದು ಒಟ್ಟು ಮಾಸಿಕ ಕಂತನ್ನು ಸಂದಾಯ ಮಾಡತಕ್ಕದ್ದು. ಮೊದಲ ಕಂತನ್ನು ಪೂರ್ಣವಾಗಿ ಸಂದಾಯ ಮಾಡಬೇಕು. ಮತ್ತು 2ನೇ ಕಂತಿನಿಂದ ಮುಂದಕ್ಕೆ ಲಾಭಾಂಶ ಪ್ರಾರಂಭವಾಗುತ್ತದೆ.

ಮಾಸಿಕ ಸಂದಾಯ

ಪ್ರತಿ ತಿಂಗಳ ಬಿಡ್ ವಿವರಗಳು ಮತ್ತು ಸಂದಾಯ ಮಾಡಬೇಕಾದ ಹಣವನ್ನು ಎಲ್ಲಾ ಚಂದಾದಾರರಿಗೆ ಎಸ್.ಎಂ.ಎಸ್. ಮೂಲಕ ಅಥವಾ ಇತರ ವಿಧಾನಗಳ ಮೂಲಕ ತಿಳಿಸಲಾಗುವುದು. ಆದಾಗ್ಯೂ ಮಾಹಿತಿ ತಲುಪದೇ ಇರುವ ಅಥವಾ ವಿಳಂಬವಾಗುವ ಯಾವುದೇ ಕಾರಣವು ಸಂದಾಯದ ವಿಳಂಬ ಅಥವಾ ಸಂದಾಯ ಮಾಡದೇ ಇರುವುದಕ್ಕೆ ಕಾರಣವಾಗತಕ್ಕದ್ದಲ್ಲ. ಪಾವತಿಯನ್ನು ನಗದು/ಸ್ಥಳೀಯ ಚೆಕ್/ ಡಿಡಿ ಮೂಲಕ ನಮ್ಮ ಕಛೇರಿಯಲ್ಲಿ ಸಂದಾಯ ಮಾಡಬಹುದು ಹಾಗೂ ಆನ್‌ಲೈನ್ ಮೂಲಕವೂ ಮಾಡಬಹುದು.

ವಿಳಂಬವಾದ ಅಥವಾ ಸಂದಾಯ ಮಾಡದೇ ಇರುವುದು

ಬಹುಮಾನ ಬಂದಿರುವ ಚಂದಾದಾರರು ವಿಳಂಬವಾಗಿ ಸಂದಾಯ ಮಾಡುವ ಸಂದರ್ಭದಲ್ಲಿ ವಿಳಂಬವಾದ ಅವಧಿಗೆ  ಬಡ್ಡಿಯನ್ನು ವಿಧಿಸುವುದರ ಜೊತೆಗೆ ಲಾಭಾಂಶವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಬಹುಮಾನ ಬರದೇ ಇರುವ ಚಂದಾದಾರರು ಸಂದಾಯ ಮಾಡದೇ ಇರುವುದಕ್ಕೆ ಬಡ್ಡಿಯನ್ನು ವಿಧಿಸಲಾಗುತ್ತದೆ.

ಬಹುಮಾನ ಬಾರದೇ ಇರುವ ಚಿಟ್ ಖಾತೆಗಳು

ಬಹುಮಾನ ಬಾರದೇ ಇರುವ ಚೀಟಿಯಲ್ಲಿನ ಖಾತೆಯಲ್ಲಿ ಸಂದಾಯವಾಗಿರುವ ಮೊತ್ತವನ್ನು ಬಹುಮಾನ ಪಡೆದಿರುವ ಚೀಟಿಗೆ ಮುಂದಿನ ಹೊಣೆಗಾರಿಕೆಗೆ ಪರಿಗಣಿಸಲಾಗುವುದು.

ಬಹುಮಾನಿತ ಹಣ ಬಿಡುಗಡೆ

ಈ ಬಹುಮಾನದ ಹಣ ಪಡೆಯಲು ಕಂಪನಿಯ ನಿಯಮಗಳಿಗನಿಸಾರ ನಿಗದಿಪಡಿಸಿದ ಸಮಯದೊಳಗೆ ಚಿಟ್‍ನ ಭವಿಷ್ಯದ ಹೊಣೆಗಾರಿಕೆಗೆ ಸಾಕಷ್ಟು ಭದ್ರತೆಯನ್ನು ಒದಗಿಸಬೇಕು. ಬಹುಮಾನ ಬಂದಿರುವ ಹಣವನ್ನು “ಅಕೌಂಟ್ ಪೇಯಿ ಚೆಕ್/ ಆನ್‍ಲೈನ್ ಟ್ರಾನ್ಸ್ಫರ್” ಮೂಲಕ ಮಾತ್ರವೇ ಬಿಡುಗಡೆ ಮಾಡಲಾಗುವುದು. ಬಹುಮಾನ ಬಂದಿರುವ ಚಂದಾದಾರ/ಯಶಸ್ವಿ ಬಿಡ್ಡುದಾರ ಕಂಪನಿಗೆ ಸಮರ್ಪಕವಾದ ರೀತಿಯಲ್ಲಿ ಒಂದನ್ನು ಅಥವಾ ಒಟ್ಟಾಗಿ ಆಗಲಿ ಕೆಳಗಿನ ವಿಧಗಳಲ್ಲಿ ಯಾವುದೇ ಒಂದು ವಿಧವಾದ ಭದ್ರತೆಯನ್ನು ಒದಗಿಸತಕ್ಕದ್ದು.

ಸ್ಥಿರಾಸ್ತಿ

ಬಹಮಾನ ಬಂದಿರುವ ಚಂದಾದಾರನ ಅಥವಾ ಮೂರನೇ ವ್ಯಕ್ತಿಯ ಖಾತರಿದಾರನ ಮಹಾನಗರ ಪಾಲಿಕೆ, ಯೋಜನಾ ಪ್ರಾಧಿಕಾರ ಇತ್ಯಾದಿಯಂತದ ಸಕ್ಷಮ ಪ್ರಾಧಿಕಾರದಿಂದ ಅನುಮೋದಿತವಾದ ಮುಡಾ ವ್ಯಾಪ್ತಿಯೊಳಗಿರುವ ಸ್ವತ್ತನ್ನು ಭದ್ರತೆಯಾಗಿ ಅಂಗೀಕರಿಸಲಾಗುವುದು. ಲ್ಯಾಮಿನೇಟ್ ಮಾಡಲಾದ ದಾಖಲೆಗಳೊಂದಿಗೆ ಇರುವ ಸ್ವತ್ತನ್ನು ಗ್ರಾಮ ಪಂಚಾಯಿತಿ/ ಕೃಷಿ ಸ್ವತ್ತುಗಳನ್ನು ರೆವಿನ್ಯೋ ಭೂಮಿ ಹಾಗೂ ಬಿ-ಖಾತಾ ಹೊಂದಿರುವ ಸ್ವತ್ತನ್ನು ಅಂಗೀಕರಿಸಲಾಗುವುದಿಲ್ಲ. ಸ್ವತ್ತಿನ ಕಾಗದ ಪತ್ರಗಳನ್ನು ಸ್ವತ್ತಿನ ಮೌಲ್ಯ ಮತ್ತು ಅಂಗೀಕಾರಾರ್ಹತೆಯನ್ನು ನಿರ್ಧರಿಸಲು ನಮ್ಮ ವಕೀಲರು ಹಾಗೂ ಮೌಲ್ಯ ನಿರ್ಧಾರಕರ ಮುಖಾಂತರ ಕಾನೂನು ಸಲಹೆ ಮತ್ತು ಮೌಲ್ಯ ನಿರ್ಧರಣೆಗೆ ಒಳಪಡಿಸಿ ನಂತರ ಫೋರ್‍ಮನ್ ರಿಂದ ಸ್ಥಳ ಪರಿಶೀಲನೆ ಮಾಡಿಸಲಾಗುತ್ತದೆ. ಮೌಲ್ಯ ನಿರ್ಧಾರಕರು ತಮ್ಮ ವರದಿಯಲ್ಲಿ ನೀಡಲಾದಂತೆ ಮಾರುಕಟ್ಟ ಮೌಲ್ಯದ ಶೇ 50ರಷ್ಟನ್ನು ಮಾತ್ರ ಕಂಪನಿಯು ಪರಿಗಣಿಸುತ್ತದೆ. ಸ್ವತ್ತನ್ನು ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಡಿ.ಸಿ.ಪಿ.ಎಲ್. ಹೆಸರಿಗೆ ನೊಂದಾಯಿತ ಅಡಮಾನ ಇಡಬೇಕಾಗುತ್ತದೆ. ದಸ್ತಾವೇಜೀಕರಣ, ಕಾನೂನು ಸಲಹೆ, ಮೌಲ್ಯ ನಿರ್ಧರಣೆಯ ಬಗ್ಗೆ ಶುಲ್ಕಗಳನು ಹಾಗೂ ನೋಂದಾಯಿತ ಅಡಮಾನಕ್ಕೆ ಅನ್ವಯವಾಗಬಹುದಾದ ಸ್ಟ್ಯಾಂಪ್ ಸುಂಕ ಹಾಗೂ ಸಂಬಂಧಿಸಿದ ಇತರ ಶುಲ್ಕಗಳನ್ನು ಚಂದಾದಾರನು ಭರಿಸಬೇಕಾಗುತ್ತದೆ. ಸ್ವತ್ತು ಚಂದಾದಾರನಲ್ಲದೆ ಬೇರೆ ವ್ಯಕ್ತಿಯ ಒಡೆತನದಲ್ಲಿದ್ದರೆ ಸ್ವತ್ತಿನ ಮಾಲೀಕನನ್ನು ಸಹ ಖಾತರಿದಾರರನ್ನಾಗಿ ಪರಿಗಣಿಸಲಾಗುವುದು. ಸ್ವತ್ತಿನ ಜೊತೆಗೆ ಚಂದಾದಾರನು ಭವಿಷ್ಯದ ಕಂತುಗಳಾಗಿ ಮುಂದಿನ ದಿನಾಂಕದ 5 ಚೆಕ್ಕುಗಳನ್ನು ಠೇವಣಿ ಇಡಬೇಕಾಗುತ್ತದೆ

ವೈಯಕ್ತಿಕ ಜಮೀನುದಾರ

ವೈಯಕ್ತಿಕ ಜಮೀನುದಾರನ್ನು ಗರಿಷ್ಠ ಎರಡು ಲಕ್ಷದ ಒಳಗಿನ ಮುಂದಿನ ಜವಾಬ್ಧಾರಿವರೆಗೆ ತೆಗೆದುಕೊಳ್ಳುತ್ತೇವೆ.

ಸರ್ಕಾರಿ ಉಳಿತಾಯ ಬಾಂಡ್‌ಗಳು

ಸರ್ಕಾರಿ ಉಳಿತಾಯ ಬಾಂಡ್‌ಗಳಾದ LIC, NSC, FD ಬಾಂಡ್‌ಗಳು ಹಾಗೂ ಬ್ಯಾಂಕಿನ ಗ್ಯಾರೆಂಟಿ ಅಧರದ ಮೇಲೆ ಮುಂದಿನ ಜವಾಬ್ಧಾರಿಯ ಮೊತ್ತವನ್ನು ಪರಿಗಣಿಸುತ್ತೇವೆ.

ಅತ್ಯುತ್ತಮ ಗ್ರಾಹಕ

ಅತ್ಯುತ್ತಮ ಗ್ರಾಹಕರಿಗಾಗಿ ಸಂಸ್ಥೆಯು ವಿಶೇಷವಾದಂತಹ ಯೋಜನೆಯೊಂದನ್ನು ತಂದಿದ್ದು ಆದರಂತೆ ಯಾವ ಗ್ರಹಕರು ಕಂಪನಿಯ ಜೊತೆಗೆ ಅವರ ವ್ಯವಹಾರವನ್ನು ಉತ್ತಮವಾಗಿ ಇಟ್ಟುಕೊಂಡಿರುತ್ತಾರೊ ಅಂಥವರಿಗೆ ವಿಶೇಷವಾದ ಅಧ್ಯತೆ ಅಂದರೆ ಅವರು ತೆಗೆದುಕೊಳ್ಳುವ ಯಾವುದೇ ಚೀಟಿಗಳ ಮುಂದಿನ ಜವಾಬ್ಧಾರಿ ಮೊತ್ತ 1,50,000 ರೂ ಗಳ ವರೆಗೆ ಅವರದೇ ಕುಟುಂಬದ ಸದಸ್ಯರ ವೈಯಕ್ತಿಕ ಜವಾಬ್ಧಾರಿಯನ್ನು ತೆಗೆದುಕೊಂಡು ಹಣವನ್ನು ಬಿಡುಗಡೆ ಮಾಡುವುದು. ಇದೊಂದು ಕಂಪನಿಯ ಹೆಮ್ಮೆಯ ವಿಚಾರ.

ಚಿಟ್‍ನ ವರ್ಗಾವಣೆ

ಬಹುಮಾನೇತರ ಚಂದಾದಾರನು ಯಾವುದೇ ಬಾಕಿ ಇಲ್ಲದೆ ಚಿಟ್‍ಗಳನ್ನು ಸ್ವಯಂ ತಾನೇ ಮುಂದುವರಿಸದಿರಲು ಇಚ್ಚಿಸಿದರೆ ಅಂತಹ ಚಿಟ್‍ಗಳನ್ನು ಆಸಕ್ತಿಯಿರುವ ಯಾವುದೇ ವ್ಯಕ್ತಿಗೆ ವರ್ಗಾವಣೆ ಮಾಡಬಹುದು. ಅಂತಹ ಸಂದರ್ಭದಲ್ಲಿ ಚಂದಾದಾರನು ವರ್ಗಾವಣೆಗೆ ಇರುವ ನಿಯಮಗಳನ್ನು ಪೂರೈಸತಕ್ಕದ್ದು. ಈಗಾಗಲೇ ಬಹುಮಾನ ಬಂದಿರುವ ಚಂದಾದಾರನು (ಯಶಸ್ವಿ ಬಿಡ್ಡುದಾರನು) ಅವರ ಚಿಟ್‍ನ್ನು ಮಧ್ಯದಲ್ಲಿ ಬಿಡಲಾಗುವುದಿಲ್ಲ. ಮತ್ತು ಅವರು ಸಾಕಷ್ಟು ಭದ್ರತೆಯನ್ನು ನೀಡುವ ಮೂಲಕ ಬಹುಮಾನದ ಹಣವನ್ನು ಪಡೆಯಬೇಕಾಗುತ್ತದೆ. ಬಹುಮಾನ ಬಂದಿರುವ ಚಂದಾದಾರನು ಯಾವುದೇ ವಿಳಂಬವಿಲ್ಲದೇ ನಿಗದಿತ ದಿನಾಂಕದಂದು ಅಥವಾ ಅದಕ್ಕಿಂತ ಮುಂಚೆ ನಿಯಮಿತವಾಗಿ ಕಂತುಗಳನ್ನು ಕಟ್ಟುವುದನ್ನು ಮುಂದುವರೆಸಬೇಕು. ಇಲ್ಲದಿದ್ದರೆ ಅವರು ಲಾಭಾಂಷವನ್ನು ಪಡೆಯಲು ಅನರ್ಹರಾಗುತ್ತಾರೆ.

ಚಿಟ್‍ನ ಬದಲಿ ನೇಮಕ

ಬಹುಮಾನೇತರ ಚಂದಾದಾರನಿಂದ ನಿರಂತರ ಕನಿಷ್ಠ 2 ತಿಂಗಳು ಬಾಕಿಯಾದರೆ ಅಂತಹ ಚಿಟ್‍ಗಳನ್ನು ಆಸಕ್ತಿಯಿರುವ ಯಾವುದೇ ವ್ಯಕ್ತಿಯನ್ನು ಬದಲಿ ನೇಮಕ ಮಾಡಲಾಗುವುದು. ಸಂಸ್ಥೆಯ ಬದಲಿ ನೇಮಕಕ್ಕೆ ಕಾಲಾವಧಿಯನ್ನು ದೃಢಪಡಿಸಲು ಸಾಧ್ಯವಾಗುವುದಿಲ್ಲ.

ಮರು ಹರಾಜು

ಯಶಸ್ವಿ ಬಿಡ್ಡುದಾರ / ಬಹುಮಾನ ಬಂದಿರುವ ಚಂದಾದಾರನು ಹರಾಜಿನ ದಿನಾಂಕದಿಂದ 15 ದಿನಗಳೊಳಗೆ ಬಹುಮಾನದ ಹಣವನ್ನು ಪಡೆಯಲು ವಿಫಲನಾದ ಸಂದರ್ಭದಲ್ಲಿ ಚಿಟ್‍ಫಂಡ್ಸ್ ಅಧಿನಿಯಮ 1982ರ ಪ್ರಕಾರ ಮರು ಹರಾಜಿನ ನಂತರು ಹರಾಜು ವ್ಯತ್ಯಾಸ ಇದ್ದಲ್ಲಿ ಮತ್ತು ಇದರಿಂದ ಸಂಸ್ಥೆಗೆ ನಷ್ಟವಾದಲ್ಲಿ ಆ ಹಣವನ್ನು ಅಂತಹ ಚಂದಾದಾರರಿಂದಲೇ ವಸೂಲಿ ಮಾಡಲಾಗುವುದು. ಆದಾಗ್ಯೂ ಮರು ಹರಾಜು ಮಾಡುವುದು ಸಂಸ್ಥೆಯ ವಿವೇಚನೆಗೆ ಬಿಟ್ಟದ್ದು

ಮೇಲಿನ ನಿಯಮಗಳು ಕೇವಲ ಮಾಹಿತಿಗಾಗಿ ಆಗಿದ್ದು, ಕಾಲ ಕಾಲಕ್ಕೆ ಬದಲಾವಣೆಗೆ ಒಳಪಟ್ಟಿರುತ್ತವೆ.

request a call back.

Would you like to speak to one of our financial advisers over the phone? Just submit your details and we’ll be in touch shortly. You can also email us if you would prefer.

    I would like to discuss: