ನಮ್ಮ ಬಗ್ಗೆ

ಧನದರ್ಶಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ 2006ನೇ ವರ್ಷದಲ್ಲಿ ಸ್ಥಾಪನೆಯಾಗಿದ್ದು, ವಾರ್ಷಿಕ ವಹಿವಾಟು ಹತ್ತು ಕೋಟಿ ರೂಗಳಿಗೆ ಮೀರಿದ್ದು ಇದುವರೆ ರೂ. 25,000, 30,000, 50,000, 1,00,000, 150,000, 2,00,000, 6,00,000, 9,00,000, 10,00,000, 12,00,000 ಹಾಗೂ 25,00,000 ರೂ ಗಳ ಒಳಗಿನ ವಿವಿಧ ಮೌಲ್ಯದ ಚಿಟ್ಸ್ ಗ್ರೂಪ್‌ಗಳನ್ನು ಕಂಪನಿಯು ನಡೆಸುತ್ತಿದ್ದು, ಮುಂದುವರೆದು ಹೆಚ್ಚಿನ ಮೊತ್ತದ ಗ್ರೂಪ್‌ಗಳನ್ನು ಮಾಡುವ ಸದುದ್ದೇಶವನ್ನು ಹೊಂದಿದ್ದು, ಸುಮಾರು ಐದು ಕೋಟಿ ಗಳನ್ನು ಮೀರಿದ ವ್ಯವಹಾರವನ್ನು ಮಾಡಿರುತ್ತವೆ. ಇಲ್ಲಿಯವರೆಗೂ ಎಲ್ಲಾ ಸದಸ್ಯರುಗಳಿಗೆ ಅವರ ಹಣವನ್ನು ಸಕಾಲದಲ್ಲಿ ಹಿಂದಿರುಗಿಸಲಾಗಿದೆ.

ಕಂಪನಿಯು ಬಡವರು, ಮಧ್ಯಮ ವರ್ಗದವರು, ಕಾರ್ಮಿಕರು, ಹಾಗೂ ಮೇಲ್ವರ್ಗದ ಆದಾಯುವುಳ್ಳ ಎಲ್ಲಾ ಜನರ ಅನುಕೂಲಕ್ಕೆ ತಕ್ಕಂತೆ ಚಿಟ್ಸ್ ಗ್ರೂಪ್‌ಗಳನ್ನು ಮಾಡಿ ಅವರಿಗೆ ಆರ್ಥಿಕವಾಗಿ ಹೊರೆಯಾಗುವಂತಹ ಮಕ್ಕಳ ವಿದ್ಯಾಭ್ಯಾಸ, ಮದುವೆ, ಮನೆ  ಖರೀದಿಸಲು | ಕಟ್ಟಲು | ನವೀಕರಿಸಲು, ಇತ್ಯಾದಿ ಹೀಗೆ ಅನೇಕ ಸಾಮಾಜಿಕ ಕಳಕಳಿಯುಳ್ಳ ಸಂದರ್ಭಗಳಿಗೆ ಸದಸ್ಯರು ಸದುಪಯೋಗಪಡಿಸಿಕೊಂಡು ಇಂದಿಗೂ ನಮ್ಮ ಜೊತೆ ಸಹಕರಿಸಿ, ಸಾವಿರಾರು ಸದಸ್ಯರುಗಳು ಅನುಕೂಲ ಪಡೆದಿರುತ್ತಾರೆ.

ಸದಸ್ಯರ ಭದ್ರತೆಗಾಗಿ ಕಂಪನಿಯು ಬ್ಯಾಂಕಿನಲ್ಲಿ ಫಿಕ್ಸೆಡ್ ಡಿಪಾಜಿಟ್ ಮೂಲಕ ಸುಮಾರು 1,01,10,000/- ರೂಗಳನ್ನು ದಿನಾಂಕ 20-10-2023ಕ್ಕೆ ಅನ್ವಯವಾಗುವಂತೆ ನಿಶ್ಚಿತ ಠೇವಣಿಯನ್ನು ಮೈಸೂರು ರಿಜಿಸ್ಟ್ರಾರ್‌ರವರಲ್ಲಿ ಇಟ್ಟಿರುತ್ತೇವೆ. (ಈ ಮೆಲ್ಕಂಡ ಠೇವಣಿ ಹಣವು ಆಗಿಂದಾಗ್ಗೆ ವಹಿವಾಟಿನ ಆಧಾರದ ಮೇಲೆ ಬದಲಾಗುತ್ತದೆ.)

ವಿಶೇಷವಾಗಿ ಕಂಪನಿಯು ತನ್ನದೇ ಆದ ಸ್ವಂತ ಕಛೇರಿಯನ್ನು ಹೊಂದಿದ್ದು ಇದೊಂದು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ತನ್ನ ಘನತೆಯನ್ನು ಹೆಚ್ಚಿಸುವಂತೆ ಮಾಡಿರುತ್ತದೆ. ಇದೂ ಕೂಡ ಸದಸ್ಯರುಗಳಲ್ಲಿ ಹೆಚ್ಚು ನಂಬಿಕೆ ಮೂಡುವಂತೆ ಮಾಡಿರುತ್ತದೆ.

ಕಂಪನಿಯ ಚಿಟ್‌ಫಂಡ್ ಕಾಯಿದೆ, 1982 ಮತ್ತು ಚಿಟ್‌ಫಂಡ್ (ಕರ್ನಾಟಕ) ನಿಯಮಗಳು, 1983ಕ್ಕೆ ಅನುಸಾರವಾಗಿ  ವ್ಯವಹಾರದ ಕಾರ್ಯ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಡೆಸಿಕೊಂಡು ಬಂದಿರುತ್ತದೆ.